Sunday, September 18, 2016

ಚಾಟಿಂಗ್

                    ಚಾಟಿಂಗ್ 
ಚಾಟು ಚಟ ಚಟ, ಮಾತು ವಟ ವಟ
ಮೀರಿದರೆ ಎಲ್ಲೇ, ಸಹಿಸಲಸದಳ ಈ ಕಾಟ
ಅವಿರತ ಅನವರತವಾದರೆ ಈ ಚಟ
ತಲೆ ನೋವು ತರಿಸುವುದಂತೂ ದಿಟ


                        --ಜಿ. ಪ್ರತಾಪ್ ಕೊಡಂಚ 

Friday, September 16, 2016

ಕೈ ತಪ್ಪಿದ ಅರುಣಾಚಲ



ಕೈ ತಪ್ಪಿದ ಅರುಣಾಚಲ

 


ಶ್ರೀ ಪೇಮ್ ಖಂಡು, ಹೊರ ಬಿದ್ದರು ಕೈಗೆ ಕೈ ಕೊಟ್ಟು
ಬಾಕಿಯಾರಿಲ್ಲ ಕೈ ಪಾಳಯದೀ ಒಬ್ಬರನು ಬಿಟ್ಟು
ಕಾಂಗೈಲ್ಲಿ ಉಳಿದ್ದಿದ್ದು ಒಬ್ಬರೇ ಶ್ರೀ. ನಬಾಮ್ ತೂಕಿ
ಈಗಷ್ಟೇ ಕುರ್ಚಿ ಹಿಡಿದಿದ್ರು ಪೇಮ್ ನಬಾಮ್ರನ್ನ ನೂಕಿ

                                                   - ಜಿ ಪ್ರತಾಪ್ ಕೊಡಂಚ 



Monday, January 11, 2016

ಆಕಳಿಕೆ 

ತಿರು ತಿರುಗಿ ಬಂದಾಗ ಆಕಳಿಕೆ
ಯಾರೋ ನೆನೆಯುತಿಹರೆಂಬ ಅನಿಸಿಕೆ

ಆದರೆ ಈಗ ನೋಡಿ ಬದಲಾಗಿದೆ ಕಾಲ
ಆಕಳಿಸುತ್ತಲೇ ಹೇಳಿದಳು ಮಾಲ

ಲೈಕ್ಸು, ಕಾಮೆಂಟ್ಸು ಬಂದಿರಬೇಕೆ...
ನನ್ನ ಫೆಸ್ಬುಕ್ ಚೆಕ್ ಇನ್, ಪೋಸ್ಟ್ಗೆ !!


 -- ಜಿ. ಪ್ರತಾಪ್  ಕೊಡಂಚ