Monday, January 11, 2016
Tuesday, May 21, 2013
ಇವನೇ ನಮ್ಮ ರೈತ
ಇವನೇ ನಮ್ಮ ರೈತ
ಗರಿ ಗರಿ ಇಸ್ತ್ರಿ ಹಾಕಿದ ಅಂಗಿ
ನೋಡಿ ಅವನ ಗಂಭೀರ ಭಂಗಿ
ಅವನಿನ್ನೂ ಮೀಸೆ ಮೂಡದ ಹುಡುಗ
ಕೈಯಲ್ಲಿ ಮಿಂಚುವ ಚಿನ್ನದ ಖಡಗ
ಕತ್ತಲಿ ದಪ್ಪದ ಬಂಗಾರದ ಸರಪಳಿ
ನೋಡಿದವರು ಅನ್ನಬೇಕು ಪಿಳಿ ಪಿಳಿ
ಶುದ್ದ ಬಿಳಿಯ ಕಾರು, ಕಪ್ಪು ಕನ್ನಡಕ
ಸುತ್ತ ಜನರಿದ್ರೆ ಅವನಿಗೇನೋ ಪುಳಕ
ಬೆಂಗಳೂರಿನ ಇವತ್ತಿನ ರೈತ ಭಾರಿ ಆಧುನಿಕ
ರಿಯಲ್ ಎಸ್ಟೇಟ್ ಬೆಳೆ ಅವನ ದಿನ ನಿತ್ಯದ ಕಾಯಕ
ವರ್ಷಕ್ಕೆ ಎರಡು ಭಾರಿ ಮಾರಿ ಅದೇ ಜಾಗ
ಹಾಕಿಸುತ್ತಾನೆ ಕೊಂಡವರಿಗೆ ಸಕತ್ತಾಗಿ ಲಾಗ
*********
-ಜಿ. ಪ್ರತಾಪ್ ಕೊಡಂಚ
Monday, January 17, 2011
ಬದಲಾವಣೆ
ಬದಲಾವಣೆ
ಎನಾಗಿದೇ ಇಂದೆಮಗೆ, ತಿಳಿಯದಾಯಿತು ನನಗೆ
ನೂಕುನುಗ್ಗಲು ನೋಡಿ ತಡೆಯಲಾಗದು ನಗೆ
ನಮ್ಮವರು ತಂಗುದಾಣದಿ ಬಸ್ಸು ಹತ್ತುವ ಬಗೆ
ಇರಿಸು ಮುರಿಸಾಗಿ ತರಿಸಿತ್ತು ಜೀವದಲಿ ಧಗೆ
ಇರಿಸು ಮುರಿಸಾಗಿ ತರಿಸಿತ್ತು ಜೀವದಲಿ ಧಗೆ
ಬಸ್ಸು ಅಂಕಣಕೆ ಬಂದೊಡನೇ ನುಗ್ಗಿ ಬಸ್ಸೊಳಗೆ
ಒಳಗಿದ್ದ ಪ್ರಯಾಣಿಕರು ಇಳಿಯಲಾರದೆ ಕೆಳಗೆ
ತಳಮಳಿಸುತ್ತಿರುವಂತೇ ನುಗ್ಗಿ ಬಂದರು ಹೊರಗೆ
ಹೇಳುತಿದ್ದರು ಏನೀದು ಅವ್ಯವಸ್ಥೆ ಸೀಟಿಲ್ಲವೆಮಗೆ
ಒಳಗಿದ್ದ ಪ್ರಯಾಣಿಕರು ಇಳಿಯಲಾರದೆ ಕೆಳಗೆ
ತಳಮಳಿಸುತ್ತಿರುವಂತೇ ನುಗ್ಗಿ ಬಂದರು ಹೊರಗೆ
ಹೇಳುತಿದ್ದರು ಏನೀದು ಅವ್ಯವಸ್ಥೆ ಸೀಟಿಲ್ಲವೆಮಗೆ
ನಾವು ವಿದ್ಯಾವಂತರು,ಗಣಕಾಂಶ ಪಂಡಿತರು
ಪ್ರಪಂಚದ ಹಲವು ಕಡೆ ಸುತ್ತಿಬಂದ ಪ್ರವೀಣರು
ವಿದೇಶಿ ಸ್ವಚ್ಹ ಸೌಂದರ್ಯ ಶಿಸ್ತಿನ ಪ್ರತಿಪಾದಕರು
ಆದರಿಲ್ಲಿ ಏಲ್ಲ ಮರೆತು ಆದೆವೇ(ಅ)ನಾಗರೀಕರು!
ಆಸನಕ್ಕಾಗಿ ಬಡಿದಾಡುತಿದ್ದ ಗಣಕಾಂಶದ ಗಣ
ನೋಡಿ ನಗತಲಿತ್ತು ತುಂಬಿ ತುಳುಕುತಿದ್ದ ನಿಲ್ದಾಣ
ಏಂದಿನಂತೇ ತುಂಬು ಬಸ್ಸಿನಲ್ಲಿ ನಿಂತು ಪ್ರಯಾಣ
ಮಾಡುವುದಕ್ಕೇ ತೃಪ್ತವಿತ್ತು ಪಕ್ಕದಲ್ಲಿನ ಅಂಕಣ
ನೋಡಿ ನಗತಲಿತ್ತು ತುಂಬಿ ತುಳುಕುತಿದ್ದ ನಿಲ್ದಾಣ
ಏಂದಿನಂತೇ ತುಂಬು ಬಸ್ಸಿನಲ್ಲಿ ನಿಂತು ಪ್ರಯಾಣ
ಮಾಡುವುದಕ್ಕೇ ತೃಪ್ತವಿತ್ತು ಪಕ್ಕದಲ್ಲಿನ ಅಂಕಣ
ನುಗ್ಗಿ ಬಡಿದಾಡುವುದು ನಿತ್ಯ ನಿಲ್ಲದ ಬವಣೆ
ರಸ್ತೇಯಲಿ, ಬಸ್ಸಿನಲ್ಲಿ ಇದಕಿಲ್ಲವಾಗಿದೆ ಕೊನೆ
ನಮ್ಮೋಳಗಿನ ಸಂಯಮ, ಶಿಸ್ತು, ವೀವೇಚನೆ
ಕೃತಿಯಲ್ಲಿ ತೋರಿಸಿ ತರಬಹುದೇ ಬದಲಾವಣೆ
ರಸ್ತೇಯಲಿ, ಬಸ್ಸಿನಲ್ಲಿ ಇದಕಿಲ್ಲವಾಗಿದೆ ಕೊನೆ
ನಮ್ಮೋಳಗಿನ ಸಂಯಮ, ಶಿಸ್ತು, ವೀವೇಚನೆ
ಕೃತಿಯಲ್ಲಿ ತೋರಿಸಿ ತರಬಹುದೇ ಬದಲಾವಣೆ
-ಜಿ.ಪ್ರತಾಪ ಕೊಡಂಚ
*ಮೆಜೆಸ್ಟಿಕ್ ಬಸ್ಸು ನಿಲ್ದಾಣದ ಐ.ಟಿ.ಪಿ.ಎಲ ಬಸ್ಸಿನ ಅಂಕಣದ ನೂಕು ನುಗ್ಗಲಿನ ಕುರಿತಾದ ನನ್ನ ಅನಿಸಿಕೆ
Friday, November 26, 2010
ಜೀವನದ ಬಯಕೆ
ನಿನಗೇನು ಬೇಕೆಂದು ಗೊತ್ತೇನು ನಿನೆಗೆ?
ಅಹುದೆಂಬ ಹಿರಿಮೆಯಲೇ ಅರಸುತಿಹ ನನಗೆ
ಬಹುದಿನದ ಪ್ರಯತ್ನಕೆ ಕಾಣದಾಗಿದೆ ನಗೆ
ಇನ್ನೂ ಅರಸುತಿಹೆ ಉತ್ತರಿಸುವ ಬಗೆ
ಒಂದರಮೇಲೊಂದಾಗಿ ಸೇರುತಿಹುದು ಬಯಕೆ
ಹಂದರದ ಗುಡಿ ಇದಕಿಲ್ಲ ಅಂತ್ಯವೆಂಬ ಕುಣಿಕೆ
ಎಲ್ಲ ಗೊತ್ತೆನೆಗೆ ಎನ್ನುತಲೇ ಹುಡುಕಿದೆ ಬಹುದಿನ
ಗೊತ್ತಿರುವುದು ನಿಜವೇ ಅನ್ನುವುದು ಅನುಮಾನ
ಗೊತ್ತಿರುವುದು ನಿಜವೇ ಅನ್ನುವುದು ಅನುಮಾನ
ಇನ್ನೆಷ್ಟು ದಿನ ಬೇಕೋ ಅರಿವು ನನಗಿಲ್ಲ
ಉತ್ತರ ಸೀಕ್ಕಿತೆಂಬ ಧೈರ್ಯ ಉಳಿದಿಲ್ಲ
ಹಾಗಿದ್ದೂ ಸುಮ್ಮನೆ ಬಿಡಲಾಗುವುದಿಲ್ಲ !
ಕಂಗೆಟ್ಟು ಕೂರುವುದು ನನಗೆ ಲಕ್ಷಣವಲ್ಲ
- ಪ್ರತಾಪ
Subscribe to:
Posts (Atom)
