ಅನಂತ (ರ)ದ್ದೇ ಅವಾಂತರ…
ಇತ್ತೀಚಿಗಷ್ಟೇ ಟಿವಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಬಗೆ ಬಗೆಯಾಗಿ ಚರ್ಚಿಸಲ್ಪಟ್ಟ ಬಹು ಬಿಂಬಿತ ಜನಶ್ರೀ ಟಿವಿ ಯವರ ಕನ್ನಡ ನೆಲ ಜಲದ ಕುರಿತ ಅನನ್ಯ ಅಭಿಮಾನ, ಮತ್ತು ಶ್ರೀ ಪ್ರಕಾಶ್ ರೈ ಉದ್ದಟತನ, ದಾರ್ಷ್ಟ್ಯ ಕುರಿತಾದ "ಅಭಿಮಾನ ಪ್ರದರ್ಶನದ" ರಾಮಾಯಣ ಪುರಾಣದ ಬಗ್ಗೆ ಸ್ಪುಟವಾಗಿ ಹಿಂತಿರುಗಿ ನೋಡಿ "ಶ್ರೀ (ಜನ ಶ್ರೀ ಅಲ್ಲಾ)ಸಾಮಾನ್ಯ” ನೊಬ್ಬನ ತಲೆಯಲ್ಲಿ ಮೂಡಿ ಬಂದ ಪ್ರಶ್ನೆಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದೇನಷ್ಟೆ. ಪ್ರಕಾಶ್ ರೈ ಅವರನ್ನು ಸಮರ್ಥಿಸುವ ಅಂಧಾಭಿಮಾನವಾಗಲಿ,
ಜನಶ್ರೀ ವಾಹಿನಿ, ಶ್ರೀಯುತ ಅನಂತ ಚಿನಿವಾರರನ್ನು ನಿಂದಿಸಬೇಕೆಂಬ ವೈರತ್ವವಾಗಲಿ, ಎರಡೂ ನನಗಿಲ್ಲವೆಂಬ ಅಫಿಡವಿಟ್ಟು ಸಲ್ಲಿಸುತ್ತಾ, ನನಗನ್ನಿಸಿದಂತೆ
ಪ್ರಕಾಶ್ ರೈ -ಜನಶ್ರೀ ಸಂದರ್ಶನದ ಅದ್ವಾನಕ್ಕಿಂತ ಆ ನಂತರ ನೆಡೆದಿದ್ದು
ನಿಜಕ್ಕೂ ತಪ್ಪಿಸಬೇಕಾಗಿದ್ದ ಅನಗತ್ಯ ಅವಾಂತರ.
ಇದನ್ನೇ ಸೂಚಿಸುವ ಶೀರ್ಷಿಕೆ ಕೊಟ್ಟಿದ್ದೇನೆ ಬಿಟ್ಟರೆ, ಶ್ರೀಯುತ ಚಿನಿವಾರರ
ಮೊದಲ ಹೆಸರಿಗೆ ತಳುಕು ಹಾಕುವುದು ಶೀರ್ಷಿಕೆ ಉದ್ದೇಶ ಖಂಡಿತಾ ಅಲ್ಲ. ಇದೊಂದು ಸಾಂದರ್ಭಿಕವಾಗಿ ಕೂಡಿ
ಬಂದದ್ದು ಕಾಕತಾಳೀಯ ಮತ್ತು ಆಕಸ್ಮಿಕ ಅಷ್ಟೇ!
ಶ್ರೀಯುತ ಅನಂತ ಚಿನಿವಾರರು ಹೇಳುವಂತೆ ರೈ ತಮ್ಮ ವೃತ್ತಿ ಬದುಕಿನ ಸಫಲತೆ ಕಂಡು ಕೊಂಡಿದ್ದು ನೆರೆಯ ತಮಿಳುನಾಡಿನಲ್ಲಿ ಹಾಗಾಗಿ ರೈ ಅವರಿಗೆ ತಮಿಳು ಹಿತಾಸಕ್ತಿ ಪರ ವಹಿಸಿಕೊಳ್ಳುವ ಅಗತ್ಯ, ಅನಿವಾರ್ಯತೆ ಇದೆ.
ಒಬ್ಬ ಬಹು ಭಾಷಾ ತಾರೆಗೆ ಇಂತಹ ಅನಿವಾರ್ಯತೆ ಇರುವುದು ಸಹಜವೆಂಬ ಶ್ರೀ.
ಚಿನಿವಾರರ ವಾದ ಪೂರ್ವಾಗ್ರಹ ಪೀಡಿತ ಮತ್ತು ತಮ್ಮ ಕಿರಿಯ ನಿರೂಪಕಿಯೊಬ್ಬರ ಸಹಜ ಪ್ರಶ್ನೆಗೆ
ರೈ ವ್ಯಗ್ರರಾಗಿ ಆಕೆಯ ಮೇಲೆ ದಾಳಿಗೆ ಮುಂದಾದರು ಎಂದು ಬಿಂಬಿಸ ಹೊರಟ (victimization)
ಪ್ರಯತ್ನ ಎಂದು ನನ್ನ ಅನಿಸಿಕೆ. ಯಾಕೆಂದರೆ ರೈ ಕಾವೇರಿ
ಕುರಿತು ಕನ್ನಡದ ಪರ ಸೊಲ್ಲೆತ್ತಲಿಲ್ಲ ಎಂಬ ಆರೋಪ ಎಷ್ಟು ನಿಜವೋ ಅಷ್ಟೇ ಮಟ್ಟಿಗೆ ಅವರೆಲ್ಲೂ ಕರ್ನಾಟಕದ್ದು
ತಪ್ಪು, ಕಾವೇರಿ ತಮಿಳುನಾಡಿಗೆ ಸೇರಿದ್ದು, ತಮಿಳರೇ ಕಾವೇರಿ ಸಂಪೂರ್ಣ ವಾರಸುದಾರ ಎಂದೂ ಹೇಳಿಲ್ಲವೆ. ತಮಿಳುನಾಡಿನ ಹೋರಾಟದಲ್ಲಿ ಭಾಗಿ ಆಗಿ ಕರ್ನಾಟಕ ವಿರೋಧಿ
ನೀತಿ ತೋರಿಸಿಲ್ಲ ಎಂಬುದೂ ಎಲ್ಲರೂ ಒಪ್ಪಲೇ ಬೇಕಾದ ಸತ್ಯ. ಜನ ಶ್ರೀ ಪದೇ ಪದೇ ಬಿತ್ತರಿಸಿದ ವಿಡಿಯೋದಲ್ಲಿ ಪ್ರಕಾಶ್ ರೈ ನಿಮ್ಮ ನಿರೂಪಕಿಯ ಪ್ರಶ್ನೆಗೆ
ಸೌಜನ್ಯದಿಂದ ಹೇಳಿದರಲ್ಲಾ ಸಾರ್... "ನೋಡಿ ಮೇಡಂ, ಇದು ನಾನು ನೀವು ಬಗೆ ಹರಿಸೋ ಸಾಮಾನ್ಯ ಸಮಸ್ಯೆಯಲ್ಲ, ಅದರ ಹಂದರ
ಬೇರೇನೇ ಇದೆ, ಏನು ಅಂಥಾ ನನಗೂ ನಿಮಗೂ ಇಬ್ಬರಿಗೂ ಗೊತ್ತಿದೆ, ಜನ ಈಗಾಗಲೇ ನೊಂದಿದ್ದಾರೆ, ಏನೋನೋ ಹೇಳಿಕೆ ಕೊಟ್ಟು ಉರಿಯೋ ಬೆಂಕಿಗೆ
ತುಪ್ಪ ಹುಯ್ಯೋ ಬೇಜವಾಬ್ದಾರಿ ಸರಿಯಲ್ಲ” ಇದು ತಪ್ಪಾ..?
ನಿಮ್ಮ ಇನ್ನೊಂದು ಬಹು ಮುಖ್ಯ ಪ್ರಶ್ನೆ, ನೆಲ ಜಲದ, ನಾಡು ನುಡಿಯ ಮೇಲೆ ಅಭಿಮಾನ ತೋರಿಸೋಕು ಒಬ್ಬನಿಗೆ ಸಮಯ,
ಸಂಧರ್ಭ ಬೇಕಾ?, ಈಗಲ್ಲಾದಿದ್ರೆ ರೈ ತಾಯ್ನಾಡಿಗೆ ತಮ್ಮ
ನಿಷ್ಠೆ ಪ್ರದರ್ಶಿಸೋದು ಇನ್ನ್ಯಾವಾಗ? ಸಾರ್ ತಪ್ಪು ತಿಳಿಬೇಡಿ,
ತಿಳಿದೇ ಒಂದು ಪ್ರಶ್ನೆ ಕೇಳ್ತೀನಿ, ನಿಮ್ಮ ನಿರೂಪಕಿ ಕೇಳಿದ
ಪ್ರಶ್ನೆ ಮತ್ತು ನಿಮ್ಮ ಈ ಮೇಲಿನ ಪ್ರಶ್ನೆಗಳ ಉದ್ದೇಶ ನಿಜವಾಗಿಯೂ ರೈ ಅಭಿಮಾನ ಪರೀಕ್ಷೆ ಮಾಡುವದೇ
ಆಗಿತ್ತೇ? ನನಗಂತೂ ಹಾಗೆ ಕಾಣಿಸುತ್ತಾ ಇಲ್ಲ. ಕೈ ಗೆ ಮೈಕ್ ಸಿಕ್ಕಾಗಲೊ, ಮಾತನಾಡುವ ವೇದಿಕೆ ಸಿಕ್ಕಾಗೆಲ್ಲ ನಮ್ಮ ಅಭಿಮಾನ ನಿಷ್ಠೆ ಪ್ರದರ್ಶನವಾಗಲಿ ಅಥವಾ ಆ ಸಂಧರ್ಭಗಳಲ್ಲೆಲ್ಲ ಖ್ಯಾತನಾಮರು ಅಗ್ನಿ ಪರೀಕ್ಷೆ ಎದುರಿಸಬೇಕೆಂಬ ಮಾತು ಸತ್ಯ ಸಮಂಜಸವಲ್ಲವೆನಿಸುತ್ತಿಲ್ಲ. ಸರಿ, ನಿಮ್ಮ ವಾದದ ಹಾದಿಗೆ ಬರೋಣ, ನಿಮ್ಮ
ಚಾನೆಲ್ ಸಂಸ್ಥಾಪಕ ಶ್ರೀ. ಗಾಲಿ ಜನಾರ್ಧನ ರೆಡ್ಡಿಯವರ ಪುತ್ರಿಯ ವಿವಾಹ
ಸದ್ಯದಲ್ಲೇ ಇದೆ ಎಂದು ಎಲ್ಲೋ ಓದಿದ ನೆನಪು. ನಿಮಗೆ ಖಂಡಿತಾ ಆಹ್ವಾನ ಬಂದಿರಲೇ
ಬೇಕಲ್ಲಾ? ನೀವಲ್ಲಿ ಹೋದಾಗ ನವ ದಂಪತಿಗಳಿಗೆ ಹರಸಿ, ಪಕ್ಕದಲ್ಲಿರುವ ಶ್ರೀಯುತ ಜನಾರ್ಧನ ರೆಡ್ಡಿಯವರಿಗೆ ಸದ್ಯದ ಜಟಿಲ ಕಾವೇರಿ ಸಮಸ್ಯೆಯ ಹಿನ್ನೆಲೆಯಲ್ಲಿ
ನಮ್ಮ ನೆಲ ಜಲದ ಕುರಿತಂತೆ “ಬಗೆ ಬಗೆಯಲಿ ನೆಲ ಅಗೆದ” ನಿಮ್ಮ ನಿಲುವೇನು? ಎಂದು ಕೇಳಿ ನೋಡೋಣ. ಅವರ ಪ್ರತಿಕ್ರಿಯನ್ನು ರೆಕಾರ್ಡ್ ಮಾಡಿ (ಲೈವ್ ಬೇಡ) ನಿಮ್ಮ ಚಾನೆಲ್ ನಲ್ಲಿ ಪ್ರಸಾರ ಮಾಡಿ. ಆಗ ನಿಮ್ಮ ನೆಲ ಜಲದ ಅಭಿಮಾನ ಯಾರ್ ಯಾರಿಗಿದೆ ಎಂಬ ಹುಡುಕಾಟ ಖಂಡಿತ ಸಾರ್ಥಕವೆನಿಸುತ್ತದೆ
ಮತ್ತು ಸಮಯ ಸಂದರ್ಭದ ಕುರಿತಾದ ಪ್ರಶ್ನೆಗೂ ಸಮಂಜಸ ಉತ್ತರ ಸಿಕ್ಕೀತು!
ಟಿ.ಆರ್. ಪಿ ಕೂಡಾ ನಿರೀಕ್ಷೆಗೂ ಮೀರಿ ಮೇಲೇರುತ್ತೆ.
ಇದರಲ್ಲಿ ಯಾವುದೇ ಸಂಶಯ ಇಲ್ಲ.
ಮತ್ತೆ ಮತ್ತೆ ನೀವು ಹೇಳ್ತಾ ಇರೋದು "ಮಾತಾಡಿ, ಇನ್ನಾದ್ರೂ ಮಾತಾಡಿ, ರಾಜ್ಯದಲ್ಲಿ
ಬೆಂಕಿ ಹತ್ತಿಕೊಂಡು ಉರಿತಾ ಇದೆ, ಈಗಲ್ಲದಿದ್ರೆ ಇನ್ಯಾವಾಗ ನೀವು ಮಾತಾಡೋದು?"
ಸಾರ್, ಬಿಡಿ ಪ್ರಕಾಶ್ ರೈ ನಿರಭಿಮಾನಿ, ಒಂದ್ನಿಮಿಷ ಅವರನ್ನ ಮರೆತೇ ಬಿಡಿ. ನೀವು ಬೆಂಕಿ ಹತ್ತೋ ಮುಂಚಿಂದ,
ಇವತ್ತಿನ ತನಕ ಮಾತಾಡ್ತಾ ಇದ್ದಿರಲ್ಲಾ, ಹಲವರನ್ನು ಕರೆ
ಕರೆಸಿ ಮಾತಾಡ್ಸಿದ್ರಲ್ಲ… ಏನಾಯಿತು ಸಾರ್? ನೀವೇನಾದರೂ
ಎರಡು ರಾಜ್ಯದ ಜನರ ಮನಸ್ಸನ್ನು ಬೆಸೆದ್ರಾ? ಸಮಸ್ಯೆ ಬಗೆ ಹರಿಸಿದಿರಾ? ಬೆಂಗಳೂರಿನ ತಮಿಳಿಗರ ಮೇಲೆ
ನಿಮ್ಮ ಅಭಿಮಾನದ ಇನ್ನೆರಡು ಎರಡು ಕಲ್ಲು ಜಾಸ್ತಿ ಬಿಳೋ ಹಾಗೆ ನೋಡಿಕೊಂಡಿರಲ್ಲಾ!... ಅದೇನಾ ಸಾರ್, ನಿಮ್ಮ ನೆಲ ಜಲ ಅಭಿಮಾನದ ಪರಿಹಾರ?
ಪ್ರಕಾಶ್ ರೈ ಹೇಳ್ಬೇಕಿತ್ತು ಮೇಡಂ, ಕಾವೇರಿ ವಿಷಯ ಇವತ್ತು ಬೇಡ ಪ್ಲೀಸ್. ನಾವಿವತ್ತು ಬರಿ ಮೂವೀ ವಿಷಯ ಮಾತ್ರ ಮಾತಾಡೋಣ. ನಾಳೆನೋ, ಇನ್ನೋಮ್ಮೆನೋ ಕಾವೇರಿ ವಿಷಯ ಸೆಪೆರೇಟ್ ಆಗಿ ಮಾತಾಡೋಣ. ನಿಮ್ಮ ಪ್ರಕಾರ, ಅಲ್ಲಿಗೆ ವಿವಾದ ಹುಟ್ಟುತಾನೆ ಇರಲಿಲ್ಲ. ಚೆನ್ನಾಗಿ ಹೇಳಿದಿರಿ ಸಾರ್ ನೀವು, ಎಲ್ಲಾದರೂ ರೈ ಹಾಗೆ ಹೇಳಿದ್ದರೆ, ಸುಮ್ಮನಾಗುತ್ತಿದ್ದರಾ ನೀವು? ನೋಡ್ರಪ್ಪಾ ನೋಡಿ ರೈ ಹೇಡಿ, ನಾಡು ನುಡಿಯ ವಿಷಯ ಬಂದಾಗ ಉತ್ತರಿಸದೇ ಜಾರಿ ಕೊಂಡರು ಅನ್ನುವ "ಜನಶ್ರೀ ವಿಶೇಷ” ಸರಕು ಪ್ರದರ್ಶನ ಆರಂಭಗೊಳ್ಳುತ್ತಿತ್ತು ಅಲ್ಲವಾ? ಆದರೆ ನಿಮ್ಮ ಸಂಚಿನ ಖೆಡ್ಡಾಕ್ಕೆ ಬೀಳದ ಪ್ರಕಾಶ್ ರೈ, ತನಗನ್ನಿಸೋದು ನೇರವಾಗಿ ಹೇಳಿ ನಿಮ್ಮ ನೆಲ ಜಲದ ಅಭಿಮಾನದ ಹಿಂದಿನ ಝಳಕ್ ಸಮಸ್ತ ವೀಕ್ಷಕರೆದುರು ಬಿಚ್ಚಿಟ್ಟರು. ಅದೇ ನಿಮ್ಮ ಬೇಸರ ಹೆಚ್ಚಿಸಿ ಇನ್ನಷ್ಟು ಜಗ್ಗಾಟಕ್ಕೆ ಕಾರಣವಾಗಿದ್ದು ಇನ್ನೊಂದು ದುರಂತ. ರೈ ಅಷ್ಟೊಂದು ಕೋಪೋದ್ರಿಕ್ತರಾಗಬಾರದಿತ್ತು ಅನ್ನುವುದು ಒಪ್ಪಿಕೊಳ್ಳ ಬಹುದಾದ ವಾದವಾದರೂ, ಆ ಸನ್ನಿವೇಶದಲ್ಲಿಅವರನ್ನು ಕೋಪಗೊಳಿಸದೆ ವಾಹಿನಿ ಮಿತ್ರರು ಹಾಗೆ ಬಿಡುತ್ತಾ ಇರಲಿಲ್ಲ ಎಂಬುದೂ ನಿರ್ವಿವಾದದ ಸತ್ಯ
ಕೋಪೋದ್ರಿಕ್ತ
ಶ್ರೀ, ಚಿನಿವಾರ ರ ಸತ್ವ ಸಾತ್ವಿಕ ಆರೋಪ, “ಅಲ್ಲಾರೀ,
ನಿಮಗೆ ಕನ್ನಡ ಸಿನಿಮಾ ಬೇಕು, ಇಲ್ಲಿನ ಮಾರ್ಕೆಟ್ ಬೇಕು,
ಸಿನಿಮಾ ಮಾಡ್ದಾಗ ಮಾತ್ರ ಪುರುಸೊತ್ತು ಮಾಡ್ಕೊಂಡು ಬರ್ತೀರಾ… ‘ನಟ, ನಿರ್ದೇಶಕ, ನಿರ್ಮಾಪಕ’
ಪ್ರಕಾಶ್ ರೈ, ಪ್ರತಿ ಚಾನೆಲ್ನಲ್ಲಿ ಕೂತು ಗಂಟೆಗಟ್ಟಲೆ
ಪ್ರಮೋಷನ್ ಅಂತ ಮಾತು ಆಡ್ತೀರಾ, ಆದ್ರೆ ಕಾವೇರಿ ಕುರಿತು ನಾವು ಪ್ರಶ್ನೆ
ಕೇಳಿದರೆ ನಿಮಗೆ ಸಿಟ್ಟು ಬರುತ್ತೆ ಅಲ್ಲವಾ? ನಮ್ಮ ಜನಕ್ಕೂ ಸಿಟ್ಟು ಬರೊಲ್ಲವೇನು?
ಬರಬೇಕು, ಬರಲೇ ಬೇಕು ಕೂಡಾ”. ಅಯ್ಯಯ್ಯೋ ಸಾರ್, ಇದೇನಿದು ಸಿಟ್ಟಿನ ಭರದಲ್ಲಿ ಹೇಳೇ ಬಿಟ್ಟಿರಲ್ಲ ನಿಮ್ಮ ಉದ್ಯಮದ ಸೀಕ್ರೆಟ್, ಟಿ. ಆರ್. ಪಿ ಮರ್ಮ !
"ನಿಮ್ಮ ಬಗ್ಗೆ ಅವರು ಹೀಗೆ ಹೇಳಿದರು, ನಿಮಗೇನ್
ಅನಿಸುತ್ತೆ? ಯಾಕೆ ಸಾರ್ ಏನೂ ಅನಿಸಲ್ವಾ?
ಪುನಃ ಅವರು ಹೇಳ್ತಾನೆ ಇದಾರಲ್ಲ, ನೀವೇನೂ ಪ್ರತಿಕ್ರಿಯೆ ಕೊಡೊಲ್ಲವ್ವಾ? ಅಂತಾ ಪದೇ ಪದೇ ಕೇಳಿ
...
ಯಾಕೆ ಅವರು ಹಾಗೆ ಹೇಳಿದ್ದು? ಯಾವ ಪ್ರಶ್ನೆಗೆ ಕೊಟ್ಟ ಉತ್ತರ ಅದಾಗಿತ್ತು ಅನ್ನುವುದನ್ನೂ ಮರೆಮಾಚಿ, ಸಿಟ್ಟು ಬಾರದ ಪುಟ್ಟನಿಗೂ ಸಿಟ್ಟು ಬರಿಸಿ ಮುಂದಿನ ಕೆಲದಿನಗಳ ಬ್ರೇಕಿಂಗ್ ನ್ಯೂಸ್ ಬೆಳೆ ತಗೆಯುವ ಹಪ ಹಪಿ ನೀವೇ ಬಿಚ್ಚಿಟ್ಟಿದ್ದೀರಿ. ಇದನ್ನೇ ಕೇಳಿದ್ದು ಸಾರ್ ಪ್ರಕಾಶ್ ರೈ, ಏನಿದರ ಉದ್ದೇಶ? ಇದು ಈಗ ಬೇಕಿತ್ತಾ? ಅಂಥಾ. ಪಾಪ ರೈ ಗೆ ಗೊತ್ತಿರಲಿಲ್ಲ ಈ ಪ್ರಶ್ನೆಯ ಉತ್ತರ ನಿಮ್ಮಲ್ಲಿದೆ, ನಿಮ್ಮ ನಿರೂಪಕಿಯ ಹತ್ತಿರ ಅಲ್ಲಾ ಅನ್ನೋದು.
ಯಾಕೆ ಅವರು ಹಾಗೆ ಹೇಳಿದ್ದು? ಯಾವ ಪ್ರಶ್ನೆಗೆ ಕೊಟ್ಟ ಉತ್ತರ ಅದಾಗಿತ್ತು ಅನ್ನುವುದನ್ನೂ ಮರೆಮಾಚಿ, ಸಿಟ್ಟು ಬಾರದ ಪುಟ್ಟನಿಗೂ ಸಿಟ್ಟು ಬರಿಸಿ ಮುಂದಿನ ಕೆಲದಿನಗಳ ಬ್ರೇಕಿಂಗ್ ನ್ಯೂಸ್ ಬೆಳೆ ತಗೆಯುವ ಹಪ ಹಪಿ ನೀವೇ ಬಿಚ್ಚಿಟ್ಟಿದ್ದೀರಿ. ಇದನ್ನೇ ಕೇಳಿದ್ದು ಸಾರ್ ಪ್ರಕಾಶ್ ರೈ, ಏನಿದರ ಉದ್ದೇಶ? ಇದು ಈಗ ಬೇಕಿತ್ತಾ? ಅಂಥಾ. ಪಾಪ ರೈ ಗೆ ಗೊತ್ತಿರಲಿಲ್ಲ ಈ ಪ್ರಶ್ನೆಯ ಉತ್ತರ ನಿಮ್ಮಲ್ಲಿದೆ, ನಿಮ್ಮ ನಿರೂಪಕಿಯ ಹತ್ತಿರ ಅಲ್ಲಾ ಅನ್ನೋದು.
ಪ್ರಕಾಶ್
ರೈ ಸೇರಿದಂತೆ, ನಾಡಿನ
ದಿಗ್ಗಜರಾದ ಶ್ರೀಯುತ ನಾರಾಯಣಮೂರ್ತಿ, ಅಜೀಮ್ ಪ್ರೇಮ್ ಜಿ ಮೊದಲಾದವರು ಈ ಸನ್ನಿವೇಶದಲ್ಲಿ ನಾಡು ನುಡಿ ಬಗ್ಗೆ
ತಮ್ಮ ನಿಷ್ಠೆ ವ್ಯಕ್ತ ಪಡಿಸಿಲ್ಲವೆಂಬ ಸೂಕ್ಷ್ಮವನ್ನು ವೀಕ್ಷಕರ ಮುಂದಿಟ್ಟ ಶ್ರೀಯುತ ಚಿನಿವಾರರು
ಇದಕ್ಕೆ ಕೊಡುವ ಕಾರಣ ಕೂಡಾ ಗಮನಾರ್ಹವೇ. ಅವರ ಪ್ರಕಾರ ಇವರೆಲ್ಲರಿಗೂ ಇರುವುದು ಕೇವಲ ವ್ಯಾಪಾರಿ
ಆಸಕ್ತಿ. ಏನೇ ಆದರೂ ತಮ್ಮ ಹಣ ಬಲದಿಂದ ದಕ್ಕಿಸಿಕೊಳ್ಳುತ್ತೇವೆ ಎಂಬ ಅಹಂಕಾರ ಇಂತಹ ದಿಗ್ಗಜರಿಗಿದೆ, ಹಾಗಾಗಿ ನಾಡು
ನುಡಿಗಿಂತ ಅವರಿಗೆ ತಮ್ಮ ಅಂತರರಾಜ್ಯ ವ್ಯಾಪಾರ ಮತ್ತು ಲಾಭವೇ ಮುಖ್ಯವಾಗುತ್ತದೆ ಎಂಬರ್ಥದ
ವಿಮರ್ಶೆ ತೆರೆದಿಡುತ್ತಾರೆ. ಅದೇನೋ ಒಪ್ಪಿಕೊಳ್ಳೋ ಮಾತೆ. ಆದರೆ ನನಗನ್ನಿಸುವುದು ರೈ, ಸೇರಿದಂತೆ ನೀವು ಹೆಸರಿಸಿದ ಎಲ್ಲಾ ಅತಿರಥ ಮಹಾರಥರು, ತಮ್ಮ ಲಾಭದ ಕಿಂಚಿತ್ತು
ಆದರೂ ತಮಗೆ ಕಾಣಿಸಿದ ಸಾಮಾಜಿಕ ಕಳಕಳಿಯ,
ಸುತ್ತಲಿನ ಜನ ಜೀವನ ಉತ್ತಮಗೊಳಿಸುವ ಯಾವುದೋ ಒಂದು ಕಾಯಕಕ್ಕೆ ಬಳಸಿ, ತಕ್ಕ ಮಟ್ಟಿನ
ಕೊಡುಗೆ ಕೊಟ್ಟಿದ್ದಾರೆ ಅಂತ ಶ್ರೀ ಚಿನಿವಾರ ರೂ ಒಪ್ಪಿಕೊಳ್ಳುತ್ತಾರೆ. ಅವರಿಗೆ ಸಮಾಜಕ್ಕೆ, ಈ ನಾಡಿಗೆ ತಮ್ಮ ಕಾಣಿಕೆ ಏನು ಎಂದು
ಪ್ರಚಾರ ಮಾಡಿಕೊಳ್ಳುವ ಆಸಕ್ತಿ ಇಲ್ಲದಿರಬಹುದು. ನಿಮ್ಮ ಕಾಣಿಕೆ ಏನು ಹೇಳಿ
ನೋಡೋಣ? ಎಂಬ
ನಿಮ್ಮ ಪಂಥಾಹ್ವಾನದ ಮೂಲಕ ಅವರನ್ನೂ ಮಾಧ್ಯಮದವರ
ರೀತಿ ಪ್ರಚಾರದ ಗೀಳಿಗೆ ಒಡ್ಡಬೇಡಿ ಸಾರ್, ಬಿಟ್ಟು ಬಿಡಿ
ಅವರನ್ನ, ಏನೋ
ಮಾಡುತ್ತಾರೆ ಅವರ ಪಾಡಿಗೆ ಇರಲಿ ಬಿಡಿ ಪಾಪ .
ಇನ್ನು
ವ್ಯಾಪಾರಿ ಆಸಕ್ತಿ ಕುರಿತು ನೋಡಿದರೆ,
ಯಾರಿಗಿಲ್ಲ ಹೇಳಿ? ಸರ್ವ
ಸಂಘ ಪರಿತ್ಯಾಗಿ ಸಾಧು ಸಂತರನ್ನು ಬಿಟ್ಟಿರದ ವ್ಯಾಪಾರದ ಮೋಹ, ವೃತ್ತಿ ಪರ ವ್ಯಾಪಾರಿಗಳಿಗಿರುವುದು ನನಗಂತೂ
ತಪ್ಪೆನ್ನಿಸುವುದಿಲ್ಲ. ನಾರಾಯಣ ಮೂರ್ತಿಯವರಾಗಲಿ, ಪ್ರೇಮ್ ಜಿ
ಅವರಾಗಲಿ ಕಾವೇರಿ ವಿಷಯದಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ, ಹಾಗಾಗಿ ನಮ್ಮಲ್ಲಿರುವ ಎಲ್ಲ ತಮಿಳು ಉದ್ಯೋಗಿಗಳು ಕೆಲಸ ಬಿಟ್ಟು ಹೋಗಿ
ಅಂತ ಹೇಳೋಕೆ ಆಗುತ್ತಾ ಸಾರ್? ನಿಜ ಹೇಳಬೇಕೂಂದರೆ,
ನಿಮ್ಮದೂ ಒಂಥರಾ ವ್ಯಾಪಾರಿ ಆಸಕ್ತಿಯೇ ತಾನೇ?
ನಡೆಯುತ್ತಿರುವ ಹೋರಾಟದ ಕಿಚ್ಚು ಹೆಚ್ಚಿಸುವಲ್ಲಿ ಅತೀ ಹೆಚ್ಚಿನ ಕಾಣಿಕೆ ಸಲ್ಲಿಸಿ, ಇತರ
ಮಾಧ್ಯಮಗಳಿಗಿಂತ ನಾವು ಮುಂದಿರಬೇಕೆಂಬ ಬಯಕೆ ಕೂಡಾ ವ್ಯಾಪಾರಿ ಆಸಕ್ತಿಯೇ, ಅಲ್ಲವಾ ಸಾರ್? ನಿಮ್ಮುದ್ದೇಶ ಎನಿದ್ದರೂ ಉರಿಯುತ್ತಿರುವ ಬೆಂಕಿ ಆರಬಾರದು, ಈ ಬೆಂಕಿಗೆ
ಇವತ್ತು ರೈ ಆಹುತಿ , ನಾಳಿನ
ಉರುವಲು ಮೂರ್ತಿ ಯವರು, ನಾಡಿದ್ದು
ಪ್ರೇಮ್ ಜಿ ಯವರು, ಹೀಗೆ ಸಾಗುತ್ತದೆ
ಆಹುತಿ ಪ್ರಹಸನ, ನಿಮಗಂತೂ ಸುದ್ದಿ ದಾರಿದ್ರ್ಯವಾಗಬಾರದಷ್ಟೇ. ಇದೆ ನಿಮ್ಮ ಅಭಿಮಾನದ ನೈಜ
ಸ್ಫೂರ್ತಿ.
ಹಿಂದೊಮ್ಮೆ
ಸಿಂಗಂ ಓ, ಪಂಗಂ ಓ
ಸಿನಿಮಾದಲ್ಲಿಕನ್ನಡಿಗರಿಗೆ ಅವಮಾನ ಮಾಡುವ ಸಂಭಾಷಣೆ ಆಡಿದ್ದರು ರೈ, ಆಗಲೆ ತನಗೆ ನಾಡು
ನುಡಿ ಮುಖ್ಯ ಅಲ್ಲ ಎಂಬ ಭಾವ ತೋರಿಸಿದ್ದರು ಎಂಬುದು ನಿಮ್ಮ ಅಭಿಪ್ರಾಯ. ಮೊತ್ತ ಮೊದಲಿಗೆ ಸಾರ್, ಆ ಸಿನಿಮಾದ ಹೆಸರು ಸಿಂಗಂ,
ಪಂಗಂ ಅಲ್ಲಾ. ಇನ್ನು, ಆ ಸಂಭಾಷಣೆ ಬರದದ್ದು ರೈ ಅಲ್ಲ. ರೈ ಆ
ಸಿನಿಮಾದಲ್ಲಿ ನಟ ಮಾತ್ರ. ಕೊನೆಯದಾಗಿ, ಕನ್ನಡಿಗನಾಗಿ ಅಂತಹ ಸಂಭಾಷಣೆ ನಾನು ಮಾಡುವುದಿಲ್ಲ ಎಂದು
ರೈ ತನ್ನ ಕನ್ನಡಾಭಿಮಾನ ತೋರಿಸಬಹುದಿತ್ತು ಎಂಬ ವಿಷಯಕ್ಕೆ ಬಂದರೆ, ಸಂದರ್ಭಕ್ಕೆ
ಸರಿಯಾಗಿ ತಪ್ಪು ಮಾಡಿದ ಪಾತ್ರವೊಂದನ್ನು ಜರಿದು ಹೇಳಿದರೆ ನನಗೆ ತಪ್ಪೆನಿಸುವುದಿಲ್ಲ. ಕನ್ನಡಿಗರಾರೂ ತಪ್ಪೇ ಮಾಡೊಲ್ಲವೇ? ಇನ್ನೊಬ್ಬ ರಿಂದ ಮಾತು ಕೇಳುವುದಿಲ್ಲವೇ? ನಮ್ಮ ನಮ್ಮೊಳಗೇ ಜಗಳವಾದಾಗ ಒಬ್ಬ ಇನ್ನೊಬ್ಬನನ್ನು ನಾಯಿ, ಹೇಡಿ ಎಂದು ಬೈದು
ಕೊಳ್ಳುವುದಿಲ್ಲವೇ? ಹೇಳಿ ಸಾರ್, ಒಂದು
ಮಾರಾಠಿ ಪಾತ್ರ ಇನ್ನೊಂದು ಕೆಟ್ಟ ವರ್ತನೆಯ ಕನ್ನಡದ ಪಾತ್ರಧಾರಿಗೆ ಆ ಸನ್ನಿವೇಶಕ್ಕೆ ಸರಿಯಾಗಿ
ನಿಂದಿಸಿದರೆ ತಪ್ಪೆನಿಸುತ್ತದೆಯೇ. ಟಿವಿ.
ಮಾಧ್ಯಮದಲ್ಲೇ ನಿಮ್ಮಂಥ ಹಲವು ಹಿರಿಯರು ನಾವು ಕನ್ನಡಿಗರು ಒಗ್ಗಟ್ಟು ಪ್ರದರ್ಶಿಸುವುದಿಲ್ಲ, ನಾಲಾಯಕ್ ಗಳು
ಎಂಬರ್ಥದ ಹತಾಶ ಮಾತು ಹಲವು ಬಾರಿ ಆಡಿಲ್ಲವೇನು?
ಪಬ್ಲಿಕ್ ಟಿವಿ ರಂಗಣ್ಣ ನವರಂತೂ ಈ ಪಾಪಿ ಗಳು
ಇನ್ನು ಉದ್ಧಾರ ಆದ ಹಾಗೆ, ನೀರಿನ ಪ್ರಶ್ನೆ ಹಾಳಾಗಿ ಹೋಗಲಿ ಬಿಡಿ, ಆಲ್ ರೈಟ್… ಎಂದು ಬೆಳ್ಳಂಬೆಳ್ಳಿಗ್ಗೆ ಹೇಳುತ್ತಾನೆ ಇರ್ತಾರೆ. ಇದನ್ನು ಅವರು ಈ
ನಾಡು ನುಡಿಯ ಕುರಿತು ನೀವು ಅಗೌರವ, ಉದ್ಧಟತನ ತೋರಿಸಿದ್ದೀರಿ ಅಂಥ ಜರಿಯೋದು ಸರಿನಾ? ನೀವೇ ಹೇಳಿ ನೋಡೋಣ.
ನಿಮ್ಮ
ಪ್ರಮುಖ ಪ್ರಶ್ನೆ ಇಂತಿಪ್ಪ ಶ್ರೀ ಶ್ರೀಯುತ ಪ್ರಕಾಶ್ ರೈ, ನೀವೇಕೆ ಕನ್ನಡ
ಸಿನಿಮಾ ಮಾಡ್ತೀರಿ? ಅಯ್ಯೋ ಬಿಡಿ ಸಾರ್ ನೀವು ನಿಮ್ಮ ತಂಡದವರು ನೋಡ್ಲೆ
ಬೇಡಿ. ರಿಮೇಕೋ ಸ್ವಮೇಕೋ ನನ್ನಂತವನು ನೋಡ್ತಾನೆ ಖುಷಿ ಪಡ್ತಾನೆ, ಇಲ್ಲ ಒಮ್ಮೊಮ್ಮೆ ಅತ್ತು ಬಿಡ್ತಾನೆ (“ನಾನು ನನ್ನ
ಕನಸು” ನೋಡಿದರೆ, ಇವತ್ತಿಗೂ ನನಗೆ ಅಳು ಬರುತ್ತೆ) ಬಿಟ್ಟು ಬಿಡಿ ಅವರನ್ನ ಮತ್ತು ನನ್ನಂತಹ ವೀಕ್ಷಕರನ್ನ, ನಮ್ಮ ಪಾಡಿಗೆ
ಎಂದರೆ ಕಟುವಾಗಲಾರದು ಎಂಬುದು ನನ್ನ ಅನಿಸಿಕೆ.
ಸಂಪಾದಕೀಯದ
ಕೊನೆಯಲ್ಲಿ ನೀವೇ ಒಪ್ಪಿಕೊಳ್ಳುತ್ತೀರಿ, ಸುಪ್ರೀಂ ಕೋರ್ಟ್ ನ ತೀರ್ಪು ಕನ್ನಡಿಗರನ್ನ ಇನ್ನಷ್ಟು
ಹತಾಶರಾಗಿಸಿದೆ. ನಾವು ಏನು ಮಾಡಿದರೂ ಪ್ರಯೋಜನವಿಲ್ಲ. ನೀರಿಲ್ಲದೆ ನಾವು ಬದುಕಬೇಕೆ? ಬೇಡವೇ? ಎಂದು ತಮಿಳು ನಾಡಿನ ಮುಂದೆ ಮಂಡಿಯೂರವುದೊಂದೇ ಉಳಿದ
ದಾರಿ ಎಂಬ ಕಟು ಸತ್ಯ ಬಚ್ಚಿಟ್ಟ ನೀವೇ ಹೇಳಿ, ಪ್ರಕಾಶ್ ರೈ ಇದೊಳ್ಳೆ ರಾಮಾಯಣ
ಚರ್ಚೆಯಲ್ಲಿ ಕಾವೇರಿದ ಹೋರಾಟಕ್ಕೆ ನಾನೂ ಧುಮುಕುತ್ತೇನೆ ಅಂದರೂ, ಬಿಟ್ಟರೂ ಏನು ಉಪಯೋಗ? ನಿಮ್ಮ ಪ್ರಶ್ನೆಗಳಿಗೆ ಉತ್ತರ ನಿಮ್ಮ
ಮಾತಿನಲ್ಲೇ ಇದೆ. ತಣ್ಣಗಿನ ಮನ ಸ್ಥಿತಿಯಲ್ಲಿ ಒಮ್ಮೆ ಮೆಲಕು ಹಾಕಿ ನೋಡಿ, ಎಂಬುದೇ ನನ್ನ ವಿನಮ್ರ ವಿನಂತಿ.
ಇನ್ನು
ರೈ ವಿರೋಧಿ ಪಾಳಯದಲ್ಲಿ ಕೇಳಿ ಬರುತ್ತಿರುವ ಇತ್ತೀಚಿನ ಧ್ವನಿ, ರೈ ಹಿಂದೆ
ರೋಹಿತ್ ವೇಮುಲನ ದೇಶ ದ್ರೋಹಿ ಹೇಳಿಕೆಯನ್ನು ಬೆಂಬಲಿಸುವ ನಿಲುವು ತಳೆದವರು, ಈಗ
ಹಿಂಜರಿಯುತ್ತಿರುವುದು ಎಷ್ಟು ಸರಿ?
ಮತ್ತು ಹೇಗೆ ಸಮರ್ಥನೀಯ?
ಎಂಬದು. ರೈ ತಳೆದ ದೇಶ ದ್ರೋಹಿ ಬೆಂಬಲಿಕೆಯ ನಿಲುವು ಖಂಡಿತಕೂ ಸರಿಯಲ್ಲ. ಆದರೆ ಆಗ ನಿಲುವು
ತಳೆದವರು ಈಗಲೂ ತೆಗೆದುಕೊಳ್ಳಲಿ ಎಂಬ ಒತ್ತಾಯವಾಗಲಿ,
ಹಿಂದೆ ದೇಶ ದ್ರೋಹಿ ನಿಲುವು ಹೊಂದಿದ್ದರಿಂದ ಅವರು ಈಗ ಮತ್ತು ಮುಂದೆಂದಿಗೂ ಮಾಡುವುದನ್ನು
ವಿರೋಧಿಸುವುದು ಅನಿವಾರ್ಯ ಎಂಬುದು ನನಗಂತೂ ಸರಿ ಎನಿಸುತ್ತಿಲ್ಲ. ವಿರೋಧಿಸಿ ಆಗಿದೆ, ಇತರ ವಾದಗಳನ್ನೂ
ನೋಡಿದ ಮೇಲೆ, ಈ
ಘಟನೆಯಲ್ಲಿ ರೈ ನಡವಳಿಕೆ ಸರಿ ಎಂಬ ವಿಮರ್ಶೆ ಬಹುಪಾಲು ಸರಿ ಎನಿಸಿದ ಮೇಲೂ, ತಮ್ಮ ಮೊದಲಿನ
ವಿರೋಧದ ಧ್ವನಿ ಎತ್ತಿ ಹಿಡಿಯಲೋಸಗ ಮಾಡುತ್ತಿರುವ ಪ್ರತಿಷ್ಠೆಯ ವಿರೋಧವೇ ಹೊರತು ವಿಷಯಾಧಾರಿತ
ಪ್ರಸ್ತುತತೆ ಅಲ್ಲವೆನಿಸುತ್ತದೆ.
ಪ್ರತಿಷ್ಠೆಯ
ಹೋರಾಟಕ್ಕಿಳಿದರೆ ಬಡವಾಗುವುದು ನಾವೇ,
ಬಳಲುವುದು ನಮ್ಮ ನಾಡು,
ನುಡಿ, ಸಂಸ್ಕೃತಿ.
ಹಾಗಾಗಿ ಸಮ ಚಿತ್ತ, ಸಮ
ತತ್ವದ ಸತ್ವಯುತ ಸ್ಪರ್ಧೆ ಮೂಡಿಸುವ ರಚನಾತ್ಮಕ ಚರ್ಚೆ ನಡೆದು ನನ್ನಂತ ಸಾಮಾನ್ಯನಿಗೆ ನೆರವಾಗಿ, ಹೊರಗಿನವರ
ನಗುವಿಗೆ, ಲಾಭಕ್ಕೆ
ನಮ್ಮೊಳಗಿನ ಜಗಳ ಎಡೆ ಮಾಡಿಕೊಡದಿರಲಿ ಎಂಬುದೇ ನನ್ನ ಆಶಯ. ಇದು ತಪ್ಪಲ್ಲವೆಂದು ಭಾವಿಸುತ್ತಾ, ಮೇಲಿನ ನೇರ
ಅನಿಸಿಕೆಗಳನ್ನು ದಾಖಲಿಸಿದ್ದೇನೆ.
ಇಂತೀ ನಿಮ್ಮ ಪ್ರೀತಿಯ,
ಜನ ಶ್ರೀಸಾಮಾನ್ಯ
ಶ್ರೀ ಅನಂತ ಚಿನಿವಾರರ ಸಂಪಾದಕೀಯ ವಿಡೀಯೋದ ಯು ಟ್ಯೂಬ್ ಲಿಂಕ್