Tuesday, May 21, 2013

ಇವನೇ ನಮ್ಮ ರೈತ

ಇವನೇ ನಮ್ಮ ರೈತ

 
ಗರಿ ಗರಿ ಇಸ್ತ್ರಿ ಹಾಕಿದ ಅಂಗಿ
ನೋಡಿ ಅವನ ಗಂಭೀರ ಭಂಗಿ
 
ಅವನಿನ್ನೂ ಮೀಸೆ ಮೂಡದ ಹುಡುಗ
ಕೈಯಲ್ಲಿ ಮಿಂಚುವ ಚಿನ್ನದ ಖಡಗ
 
ಕತ್ತಲಿ ದಪ್ಪದ ಬಂಗಾರದ ಸರಪಳಿ
ನೋಡಿದವರು ಅನ್ನಬೇಕು ಪಿಳಿ ಪಿಳಿ
 
ಶುದ್ದ ಬಿಳಿಯ ಕಾರು, ಕಪ್ಪು ಕನ್ನಡಕ
ಸುತ್ತ ಜನರಿದ್ರೆ ಅವನಿಗೇನೋ ಪುಳಕ
 
ಬೆಂಗಳೂರಿನ ಇವತ್ತಿನ ರೈತ ಭಾರಿ ಆಧುನಿಕ
ರಿಯಲ್ ಎಸ್ಟೇಟ್ ಬೆಳೆ ಅವನ ದಿನ ನಿತ್ಯದ ಕಾಯಕ
 
ವರ್ಷಕ್ಕೆ ಎರಡು ಭಾರಿ ಮಾರಿ ಅದೇ ಜಾಗ
ಹಾಕಿಸುತ್ತಾನೆ ಕೊಂಡವರಿಗೆ ಸಕತ್ತಾಗಿ ಲಾಗ
 
*********
-ಜಿ. ಪ್ರತಾಪ್ ಕೊಡಂಚ