Friday, November 26, 2010

          ಜೀವನದ ಬಯಕೆ
ನಿನಗೇನು ಬೇಕೆಂದು ಗೊತ್ತೇನು ನಿನೆಗೆ?
ಅಹುದೆಂಬ ಹಿರಿಮೆಯಲೇ ಅರಸುತಿಹ ನನಗೆ
ಬಹುದಿನದ ಪ್ರಯತ್ನಕೆ ಕಾಣದಾಗಿದೆ ನಗೆ
ಇನ್ನೂ ಅರಸುತಿಹೆ ಉತ್ತರಿಸುವ ಬಗೆ

ಒಂದರಮೇಲೊಂದಾಗಿ ಸೇರುತಿಹುದು ಬಯಕೆ
ಹಂದರದ ಗುಡಿ ಇದಕಿಲ್ಲ ಅಂತ್ಯವೆಂಬ ಕುಣಿಕೆ
ಎಲ್ಲ ಗೊತ್ತೆನೆಗೆ ಎನ್ನುತಲೇ ಹುಡುಕಿದೆ ಬಹುದಿನ
ಗೊತ್ತಿರುವುದು ನಿಜವೇ ಅನ್ನುವುದು ಅನುಮಾನ

ಇನ್ನೆಷ್ಟು ದಿನ ಬೇಕೋ ಅರಿವು ನನಗಿಲ್ಲ
ಉತ್ತರ ಸೀಕ್ಕಿತೆಂಬ ಧೈರ್ಯ ಉಳಿದಿಲ್ಲ
ಹಾಗಿದ್ದೂ ಸುಮ್ಮನೆ ಬಿಡಲಾಗುವುದಿಲ್ಲ !
ಕಂಗೆಟ್ಟು ಕೂರುವುದು ನನಗೆ ಲಕ್ಷಣವಲ್ಲ
                                   
                                   - ಪ್ರತಾಪ